Product SiteDocumentation Site

Red Hat Enterprise Linux 5

Release Notes

Red Hat Enterprise Linux 5.11 ಗಾಗಿನ ಬಿಡುಗಡೆ ಟಿಪ್ಪಣಿಗಳು

ಆವೃತ್ತಿ 11

Red Hat ಕಸ್ಟಮರ್‌ ಕಂಟೆಂಟ್ ಸರ್ವಿಸಸ್


ಲೀಗಲ್ ನೋಟೀಸ್

Copyright © 2014 Red Hat, Inc.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
MySQL® is a registered trademark of MySQL AB in the United States, the European Union and other countries.
All other trademarks are the property of their respective owners.


1801 Varsity Drive
RaleighNC 27606-2072 USA
Phone: +1 919 754 3700
Phone: 888 733 4281
Fax: +1 919 754 3701

ಸಾರಾಂಶ
Red Hat Enterprise Linux 5.11 ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 5.8 ಬಿಡುಗಡೆ ಟಿಪ್ಪಣಿಗಳಲ್ಲಿ Red Hat Enterprise Linux  5 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಸಣ್ಣ ಬಿಡುಗಡೆಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ಬಗೆಗಿನ ವಿವರಗಳಿಗಾಗಿತಾಂತ್ರಿಕ ಟಿಪ್ಪಣಿಗಳು ಅನ್ನು ನೋಡಿ.

ಮುನ್ನುಡಿ
1. ಅನುಸ್ಥಾಪನೆ ಮತ್ತು ಬೂಟ್‌ ಮಾಡುವಿಕೆ
2. ಕರ್ನಲ್
3. ಸಾಧನದ ಚಾಲಕಗಳು
4. ಚಂದಾದಾರಿಕೆ ವ್ಯವಸ್ಥಾಪನೆ
5. ವರ್ಚುವಲೈಸೇಶನ್
6. ಇಂಡಸ್ಟ್ರಿ ಸ್ಟ್ಯಾಂಡರ್ಡ್ಸ್ ಮತ್ತು ಸರ್ಟಿಫಿಕೇಶನ್
A. ಪರಿಷ್ಕರಣ ಇತಿಹಾಸ

ಮುನ್ನುಡಿ

Red Hat Enterprise Linux 5.11 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. 5.11 ಗಾಗಿನ Red Hat Enterprise Linux ಗೆ ಮಾಡಲಾದ ಅಪ್‌ಡೇಟ್‌ನ ಕುರಿತದಾದ ವಿವರವಾದ ದಸ್ತಾವೇಜನ್ನು ನೋಡಲು ತಾಂತ್ರಿಕ ಟಿಪ್ಪಣಿಗಳನ್ನು ನೋಡಿ.

ಅಧ್ಯಾಯ 1. ಅನುಸ್ಥಾಪನೆ ಮತ್ತು ಬೂಟ್‌ ಮಾಡುವಿಕೆ

SMBIOS ಅನ್ನು dmidecode ಬೆಂಬಲಿಸುತ್ತದೆ

dmidecode ಸೌಲಭ್ಯವು ಸಿಸ್ಟಮ್ ಮ್ಯಾನೇಜ್ಮೆಂಟ್ BIOS (SMBIOS) ಆವೃತ್ತಿ 2.8 ಅನ್ನು ಬೆಂಬಲಿಸುತ್ತಿದ್ದು, ಇದು ವಿವಿಧ ವ್ಯಾಪ್ತಿಯ ನಿರ್ಮಾಣಗಳು ಮತ್ತು ನಿಯೋಜನೆ ಮಾಡಲು dmidecode ಅನ್ನು ಸಕ್ರಿಯಗೊಳಿಸುತ್ತದೆ.

ಅಧ್ಯಾಯ 2. ಕರ್ನಲ್

ಕಾಲಾವಧಿ ತೀರಿಕೆ ಮೌಲ್ಯದ ನಿಯಂತ್ರಣ

Red Hat Enterprise Linux 5.11 kernel ಈಗ I/O ದೋಷ ಚೇತರಿಕೆ ಆದೇಶಗಳಿಗಾಗಿ ಕಾಲಾವಧಿ ತೀರಿಕೆಯ ಮೌಲ್ಯವನ್ನು ಹೊಂದಿರುತ್ತದೆ. ಈ ಹಿಂದೆ, ಮರುಪ್ರಯತ್ನದ ಮೌಲ್ಯವನ್ನು 5 ಕ್ಕೆ ಹೊಂದಿಸಲಾಗಿತ್ತು, ಇದು 90-ಸೆಕೆಂಡಿನ ಕಾಲಾವಧಿ ತೀರಿಕೆ ಸಂದೇಶಗಳಿಗೆ ಸಮನಾಗಿರುತ್ತಿತ್ತು. ಕಾಲಾವಧಿ ತೀರಿಕೆ ಪದರಗಳ ಹೆಚ್ಚು ಸಕ್ಷಮವಾದ ನಿರ್ವಹಣೆಗಾಗಿ ಮರುಪ್ರಯತ್ನದ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ .

MegaRAID SAS ಚಾಲಕವನ್ನು ಹೊಂದಿರುವ LSI 12 Gb/s ಅಡಾಪ್ಟರುಗಳು

LSI MegaRAID SAS 9360/9380 12Gb/s ನಿಯಂತ್ರಕಗಳನ್ನು ಈ ಹಿಂದೆ ತಂತ್ರಜ್ಞಾನ ಮುನ್ನೋಟವಾಗಿ ಬೆಂಬಲಿಸಲಾಗುತ್ತಿತ್ತು, ಈಗ Red Hat Enterprise Linux 5.11 ನಲ್ಲಿ ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ.

ಅಧ್ಯಾಯ 3. ಸಾಧನದ ಚಾಲಕಗಳು

ProLiant ಪೂರೈಕೆಗಣಕ ಬೆಂಬಲ

cciss ಚಾಲಕವು ಈಗ HP SAS ಸ್ಮಾರ್ಟ್ ಅರೇ ನಿಯಂತ್ರಕಗಳನ್ನು ಹೊಂದಿರುವ ProLiant ಪೂರೈಕೆಗಣಕಗಳನ್ನು ಬೆಂಬಲಿಸುತ್ತದೆ.

ಅಧ್ಯಾಯ 4. ಚಂದಾದಾರಿಕೆ ವ್ಯವಸ್ಥಾಪನೆ

Red Hat ಸಪೋರ್ಟ್ ಟೂಲ್‌ನಲ್ಲಿ ದೋಷ ಸಂದೇಶ ವರ್ಧಿಸುವಿಕೆ

Red Hat ಸಪೋರ್ಟ್ ಟೂಲ್‌ನಿಂದ ಡೀಬಗ್ ಸಂಕೇತಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ, (ಉದಾಹರಣೆಗೆ ಸಾಕಷ್ಟು ಡಿಸ್ಕ್ ಸ್ಥಳವು ಇಲ್ಲದೆ ಇದ್ದಾಗ) ಈಗ ಉತ್ತಮವಾದ ದೋಷ ಸಂದೇಶಗಳನ್ನು ತೋರಿಸುತ್ತದೆ.

ಚಂದಾದಾರ ವ್ಯವಸ್ಥಾಪಕ

Red Hat Enterprise Linux 5.11 ನಲ್ಲಿನ Subscription Manager ಈಗ ಬಳಕೆದಾರ ಲಗತ್ತು ನಡೆದ ತಕ್ಷಣವೆ redhat.repo ಕಡತವನ್ನು ಉತ್ಪಾದಿಸುತ್ತದೆ ಮತ್ತು yum ಸೌಲಭ್ಯಕ್ಕೆ ಕಾಯುವುದಿಲ್ಲ.
Subscription Type ಸ್ಥಳವನ್ನು Subscription Managerನಲ್ಲಿ ಸೇರಿಸಲಾಗಿದೆ. ಈ ಸ್ಥಳವನ್ನು ನೀವು ಆದೇಶ-ಸಾಲಿನಲ್ಲಿನ ಸಂಪರ್ಕಸಾಧನದಲ್ಲಿ ಹಾಗೂ ಚಿತ್ರಾತ್ಮಕ ಸಂಪರ್ಕಸಾಧನದಲ್ಲಿ ನೋಡಬಹುದು. ಇದು ನಿಮಗೆ ಚಂದಾದಾರಿಕೆಯ ವರ್ತನೆಗೆ ಕಾರಣವಾಗುವ ಗುಣವಿಶೇಷತೆಯನ್ನು ನಿರ್ಧರಿಸುವಂತಹ, ಚಂದಾದಾರಿಕೆಯ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ಈಗ ನೀವು Subscription Managerನ GUI ನಲ್ಲಿ ನೇರವಾಗಿ ರೆಪೋಸಿಟರಿಗಳನ್ನು ನಿರ್ವಹಿಸಲು ನಿಷ್ಕ್ರಿಯ ಮತ್ತು ಸಕ್ರಿಯಗೊಳಿಸಲು ಸಾಧ್ಯವಿರುತ್ತದೆ.
ಆದೇಶ-ಸಾಲಿನ ಉಪಕರಣಕ್ಕೆ ಹಲವಾರು ಸುಧಾರಣೆಗಳನ್ನು ಪರಿಚಯಿಸಲಾಗಿದೆ:
  • Red Hat Enterprise Linux 5.11 ನಲ್ಲಿ, rhsm-debug system ಉಪಕರಣವು ದೋಷ ವರದಿಗಳಿಗೆ ಲಗತ್ತಿಸಬೇಕಿರುವ ಕಡತಗಳನ್ನು ಹೊಂದಿರುವ ಟಾರ್ ಕಡತಗಳನ್ನು ರಚಿಸುತ್ತದೆ.
  • ಎರಡು ಹೊಸ ಸ್ಥಳಗಳನ್ನು ಸೇರಿಸಲಾಗಿದೆ, subscription-manager list --available ಆದೇಶದ ಔಟ್‌ಪುಟ್. Provides ಎಂಬ ಸ್ಥಳವು ವ್ಯವಸ್ಥೆಯು ಅರ್ಹವಾಗಿರುವ ಉತ್ಪನ್ನಗಳ ಹೆಸರುಗಳನ್ನು ತೋರಿಸುತ್ತದೆ. ಅನುಸರಣೆಯನ್ನು ಸುಲಭವಾಗಿಸಲು ಮತ್ತು GUI ಸಾಮ್ಯತೆಯನ್ನು ಒದಗಿಸಲು, Suggested ಎನ್ನುವ ಸ್ಥಳವನ್ನೂ ಸಹ ಸೇರಿಸಲಾಗಿದೆ.
  • subscription-manager list --available ಆದೇಶದ ಔಟ್‌ಪುಟ್ ಈಗ ಸ್ಟಾಕ್-ಕೀಪಿಂಗ್ ಯುನಿಟ್ (SKU) ಅನ್ನು ಹೊಂದಿರುತ್ತದೆ.

ಅಧ್ಯಾಯ 5. ವರ್ಚುವಲೈಸೇಶನ್

ESXi ಗಾಗಿ ಬೆಂಬಲ

virt-who ಮಧ್ಯವರ್ತಿಯು Red Hat Enterprise Linux 5.11 ರಲ್ಲಿ ಚಲಾಯಿತಗೊಂಡಾಗ, virt-who ಈಗ VMWare ESXi ನೊಂದಿಗೆ ಈಗ ವ್ಯವಹರಿಸುತ್ತದೆ ಮತ್ತು Red Hat Subscription Manager ಗಾಗಿ ಆತಿಥೇಯ ಮತ್ತು ಅತಿಥಿ ಮ್ಯಾಪಿಂಗ್ ಅನ್ನು ಪಡೆಯುತ್ತದೆ.

ಅಧ್ಯಾಯ 6. ಇಂಡಸ್ಟ್ರಿ ಸ್ಟ್ಯಾಂಡರ್ಡ್ಸ್ ಮತ್ತು ಸರ್ಟಿಫಿಕೇಶನ್

OpenSCAP ಗಾಗಿ NIST ಪ್ರಮಾಣಪತ್ರ

OpenSCAP 1.0.8 ಅನ್ನು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ಸ್ ಆಂಡ್ ಟೆಕ್ನಾಲಜಿಯ (NIST) ಸೆಕ್ಯುರಿಟಿ ಕಂಟೆಂಟ್ ಆಟೋಮೇಶನ್ ಪ್ರೊಟೊಕಾಲ್ (SCAP) 1.2 ಇಂದ ಕಾಮನ್ ವಲ್ನರೆಬಿಲಿಟಿ ಆಂಡ್ ಎಕ್ಸ್‌ಪೋಶರ್ (CVE) ಆಯ್ಕೆಯೊಂದಿಗೆ ಅತೆಂಟಿಕೇಟೆಡ್ ಕಾನ್ಫಿಗರೇಶನ್ ಸ್ಕ್ಯಾನರ್ ವರ್ಗದಲ್ಲಿ ಪ್ರಮಾಣೀಕರಿಸಲಾಗಿದೆ. ಹೊಸ SCAP ಉಪಕರಣದಗಳ ರಚನೆಯನ್ನು ಸುಲಭವಾಗಿಸಲು SCAP ಶಿಷ್ಟತೆಯ ಪ್ರತಿಯೊಂದು ಘಟಕವನ್ನು ಪಾರ್ಸ್ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಅಗತ್ಯವಿರುವ ಲೈಬ್ರರಿಯನ್ನು OpenSCAP ಒದಗಿಸುತ್ತದೆ. ಅಲ್ಲದೆ, OpenSCAP ಯು ಕಂಟೆಂಟ್ ಅನ್ನು ಡಾಕ್ಯುಮೆಂಟ್ ಆಗಿ ವಿನ್ಯಾಸಗೊಳಿಸಲು ಅಥವ ಕಂಟೆಂಟ್‌ನ ಆಧಾರದಲ್ಲಿ ವ್ಯವಸ್ಥೆಯನ್ನು ಸ್ಕ್ಯಾನ್ ಮಾಡಲು ಬಹು-ಉದ್ಧೇಶಿತ ಉಪಕರಣವನ್ನು ಒದಗಿಸುತ್ತದೆ.

ಪರಿಷ್ಕರಣ ಇತಿಹಾಸ

ಪರಿಷ್ಕರಣೆಯ ಇತಿಹಾಸ
ಪರಿಷ್ಕರಣೆ 0.0-0.0Tue Aug 05 2014Milan Navrátil
Red Hat Enterprise Linux 5.11 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ.