Welcome to Red Hat Documentation


Red Hat Documentation provides manuals, references and guides to the following Products:
ರೆಡ್ ಹ್ಯಾಟ್ ಎಂಟರ್ಪ್ರೈಸ್ ಲಿನಕ್ಸ್‍
ರೆಡ್ ಹ್ಯಾಟ್ ಎಂಟರ್ಪ್ರೈಸ್ ಲಿನಕ್ಸ್‍ ಎನ್ನುವುದು ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಮುಕ್ತ ಆಕರ ಕಾರ್ಯವ್ಯವಸ್ಥೆ ಹಾಗು ಅನ್ವಯ ನಿಯೋಜನಾ ವ್ಯವಸ್ಥೆಯಾಗಿದೆ.
ಒಂದು ಪ್ರಮಾಣಿಕೃತ ವ್ಯವಸ್ಥೆಯಲ್ಲಿ, ರೆಡ್ ಹ್ಯಾಟ್ ಎಂಟರ್ಪ್ರೈಸ್ ಲಿನಕ್ಸ್‍ ಈ ಕೆಳಗಿನವುಗಳನ್ನು ಒದಗಿಸುತ್ತದೆ:
  • ಅನ್ವಯಗಳು — ಸಾವಿರಾರು ಪ್ರಮಾಣಿಕೃತ ISV ಅನ್ವಯಗಳು.
  • ನಿಯೋಜನಾ ಅನ್ವಯಗಳು — ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲ ಅಥವ ವಾಸ್ತವ ಪರಿಚಾರಕಗಳು, ಕ್ಲೌಡ್ ಕಂಪ್ಯೂಟಿಂಗ್, ಅಥವ ತಂತ್ರಾಂಶ ಸಲಕರಣೆಗಳನ್ನು ಒಳಗೊಂಡಿದೆ.
  • ಯಂತ್ರಾಂಶ ಆಯ್ಕೆಗಳು — ಜಗತ್ತಿನ ಹೆಸರಾಂತ ಯಂತ್ರಾಂಶ ಮಾರಾಟಗಾರರಿಂದ ಒದಗಿಸಲ್ಪಡುವ ವಿಸ್ತಾರ ವ್ಯಾಪ್ತಿಯ ಪ್ಲಾಟ್‍ಫಾರ್ಮುಗಳು.
ರೆಡ್ ಹ್ಯಾಟ್ ದಸ್ತಾವೇಜುಗಳು ರೆಡ್ ಹ್ಯಾಟ್ ಎಂಟರ್ಪ್ರೈಸ್ ಲಿನಕ್ಸ್‍ನ ಅನುಸ್ಥಾಪನೆ, ನಿಯೋಜನೆ ಹಾಗು ಮೇಲ್ವಿಚಾರಣೆಯನ್ನು ನಡೆಸಲು ಮಾರ್ಗದರ್ಶನ ಒದಗಿಸುವುದರ ಜೊತೆಗೆ ಕ್ಲಸ್ಟರ್ ಅಡ್ಮಿನಿಸ್ಟ್ರೇಶನ್; ರೆಡ್ ಹ್ಯಾಟ್ ಗ್ಲೋಬಲ್ ಫೈಲ್ ಸಿಸ್ಟಂ; ರೆಡ್ ಹ್ಯಾಟ್ ವರ್ಚುವಲೈಸೇಶನ್; ಕಾರ್ಯಕ್ಷಮತೆಯನ್ನು ಹೆಚ್ಚಿಸುವುಕೆ; ಹಾಗು ದೋಷ-ಸಹನಾ ಮಲ್ಟಿಪಾಥ್ I/O ಗಳಿಗೆ ಸಂಬಂಧಿತ ಮಾರ್ಗದರ್ಶಿಗಳು ಹಾಗು ಕೈಪಿಡಿಗಳನ್ನೂ ಸಹ ಒದಗಿಸುತ್ತದೆ.
JBoss ಎಂಟರ್ಪ್ರೈಸ್ ಅಪ್ಲಿಕೇಶನ್ ಪ್ಲಾಟ್‍ಫಾರ್ಮ್
JBoss ಎಂಟರ್ಪ್ರೈಸ್ ಅಪ್ಲಿಕೇಶನ್ ಪ್ಲಾಟ್‍ಫಾರ್ಮ್ ಎನ್ನುವುದು ರೆಡ್ ಹ್ಯಾಟ್‍ನ ಎಂಟರ್ಪ್ರೈಸ್‍ಗೆಂದೆ-ತಯಾರಿಸಲ್ಪಟ್ಟ, ಜಾವಾ ಅನ್ವಯ ಹಾಗು ಸೇವೆಗಳನ್ನು ನಿರ್ಮಿಸಲು, ನಿಯೋಜಿಸಲು ಹಾಗು ಹೋಸ್ಟ್‍ ಮಾಡಲು ಬಳಸಬಹುದಾದ ಮುಕ್ತ ಆಕರ ಉಪಕರಣವಾಗಿದೆ. JBoss ಎಂಟರ್ಪ್ರೈಸ್ ಅಪ್ಲಿಕೇಶನ್ ಪ್ಲಾಟ್‍ಫಾರ್ಮ್ ಒಂದು ಕ್ಲಸ್ತರ್ ಆದಂತಹ ಜಾವಾ EE ಅನ್ವಯವನ್ನು ಆಬ್ಜೆಕ್ಟ್/ರಿಲೇಶನಲ್ ಮ್ಯಾಪಿಂಗ್ ಹಾಗು ದೃಢತೆಯೊಂದಿಗೆ(JBoss ಹೈಬರ್ನೇಟ್) ಹಾಗು ಒಂದು ಅನ್ವಯ ಫ್ರೇಮ್‍ವರ್ಕ್ ಅನ್ನು ಒಟ್ಟುಗೂಡಿಸುತ್ತದೆ (JBoss Seam).
ರೆಡ್ ಹ್ಯಾಟ್ ದಸ್ತಾವೇಜುಗಳು ಹೈಬರ್ನೇಟ್ ಹಾಗು ಸೀಮ್ ಉಲ್ಲೇಖಗಳನ್ನು, ಅನುಸ್ಥಾಪನೆ ಹಾಗು ಪರಿಚಾರಕ (ಸರ್ವರ್) ಸಂರಚನಾ ಮಾರ್ಗದರ್ಶಿಗಳನ್ನು, JBoss ಮೆಸೇಜಿಂಗ್ ಹಾಗು ಎಂಟಿಟಿ ಮ್ಯಾನೇಜರಿನ ಬಳಕೆದಾರ ಮಾರ್ಗದರ್ಶಿಗಳನ್ನು ಹಾಗು ಹೈಬರ್ನೇಟ್ ಟಿಪ್ಪಣಿಗಳಿಗೆ ಒಂದು ಸಂಪೂರ್ಣ ಉಲ್ಲೇಖಗಳನ್ನು ಒಳಗೊಂಡಂತಹ JBoss ಉಪಕರಣಗಳ ಸಂಪೂರ್ಣ ಪುಸ್ತಕಗಳನ್ನು ಒದಗಿಸುತ್ತದೆ.
JBoss ಎಂಟರ್ಪ್ರೈಸ್ ಸರ್ವಿಸ್-ಓರಿಯೆಂಟೆಡ್ ಆರ್ಕಿಟೆಕ್ಚರ್ (SOA) ಪ್ಲಾಟ್‍ಫಾರ್ಮ್
JBoss ಎಂಟರ್ಪ್ರೈಸ್ SOA ಪ್ಲಾಟ್‍ಫಾರ್ಮ್, ಒಂದು ಸಂಪೂರ್ಣ, ಆದರೆ ಸರಳ ಹಾಗು ಮುಕ್ತ ವಹಿವಾಟು ಆಟೋಮೇಶನ್ ಪ್ಲಾಟ್‍ಫಾರ್ಮನ್ನು ಒದಗಿಸುವ ಸಲುವಾಗಿ JBoss ಎಂಟರ್ಪ್ರೈಸ್ ಅಪ್ಲಿಕೇಶನ್ ಪ್ಲಾಟ್‍ಫಾರ್ಮ್ ಅನ್ನು JBoss ಎಂಟರ್ಪ್ರೈಸ್ ಸರ್ವಿಸ್ ಬಸ್ (ESB), JBoss ರೂಲ್ಸ್‍ (ಒಂದು ಮುಕ್ತ ಆಕರ ಗುಣಮಟ್ಟಗಳ ಆಧರಿತವಾದ ವಹಿವಾಟು ನಿಯಮಗಳ ಸಾಧನ) ಹಾಗು JBPM (JBoss ಎಂಟರ್ಪ್ರೈಸ್ ಫ್ರೇಮ್‍ವರ್ಕ್) ಅನ್ನು ಒಂದುಗೂಡಿಸುತ್ತದೆ.
JBoss ಎಂಟರ್ಪ್ರೈಸ್ SOA ಪ್ಲಾಟ್‍ಫಾರ್ಮ್ ದಸ್ತಾವೇಜು ಸೂಟ್, ಒಂದು JBoss ರೂಲ್ಸ್‍ ಕೈಪಿಡಿ, JBPM ಗಾಗಿನ ಒಂದು ಬಳಕೆದಾರ ಕೈಪಿಡಿ, ESB ಮೇಲ್ವಿಚಾರಣೆ ಹಾಗು ಪ್ರೋಗ್ರಾಮಿಂಗ್‍ಗಾಗಿನ ಕೈಪಿಡಿಗಳು , JBPM ಹಾಗು ESB ಅನ್ನು ಒಟ್ಟುಗೂಡಿಸುವ ಬಗೆಗಿನ ಒಂದು ಕೈಪಿಡಿ ಹಾಗು ESB ನಿರ್ವಹಣೆಯ ಬಗೆಗಿನ ಒಂದು ಕೈಪಿಡಿಯನ್ನು ಹೊಂದಿರುತ್ತದೆ.
ರೆಡ್ ಹ್ಯಾಟ್ ಸರ್ಟಿಫಿಕೇಟ್ ಸಿಸ್ಟಂ
ರೆಡ್ ಹ್ಯಾಟ್ ಸರ್ಟಿಫಿಕೇಟ್ ಸಿಸ್ಟಂ ಎನ್ನುವುದು ಒಂದು ಮುಕ್ತ-ಆಕರ, ನೈಜ-ಪ್ರಪಂಚದಿಂದ ಗಟ್ಟಿಗೊಳಿಸಲ್ಪಟ್ಟ, ಪ್ರಮಾಣಪತ್ರ ಅಥಾರಿಟಿ ಆಗಿದೆ. ಇದು ಪ್ರಮುಖ ಆರ್ಕೈವಲನ್ನೂ ಸೇರಿಸಿ ಪ್ರಮಾಣಪತ್ರ ಜೀವನಚಕ್ರ ನಿರ್ವಹಣೆ, ಅಂತರ್ಜಾಲೀಯ ಪ್ರಮಾಣಪತ್ರ ಸ್ಥಿತಿ ಪ್ರೊಟೋಕಾಲ್(OCSP) ಹಾಗು ಸ್ಮಾರ್ಟ್-ಕಾರ್ಡ್ ನಿರ್ವಹಣೆಯನ್ನು ಬೆಂಬಲಿಸುತ್ತದೆ.
ರೆಡ್ ಹ್ಯಾಟ್ ದಸ್ತಾವೇಜುಗಳು, ಅನುಸ್ಥಾಪನೆ, ನಿಯೋಜನೆ, OCSP, ನೋಂದಣಿ ಅಥಾರಿಟಿಗಳು, ಟೋಕನ್ ಸಂಸ್ಕರಣೆ, ಸ್ಮಾರ್ಟ್ ಕಾರ್ಡ್ ನಿಯೋಜನೆ ಹಾಗು ನಿರ್ವಹಣೆ, ಪ್ರಮಾಣಪತ್ರ ಹಾಗು ಟೋಕನ್ ನಿರ್ವಹಣೆ, ಪ್ರಮಾಣಪತ್ರ ರದ್ದತಿ ಹಾಗು ಸರ್ಟಿಫಿಕೇಟ್ ಸಿಸ್ಟಂನಲ್ಲಿ ಈ ಮೊದಲು ಇದ್ದದ್ದುರಿಂದ ಮೇಲಕ್ಕೆ ವರ್ಗಾವಣೆ: ನೆಟ್‍ಸ್ಕೇಪ್ ಸರ್ಟಿಫಿಕೇಟ್ ಮ್ಯಾನೇಜ್‍ಮೆಂಟ್ ಸಿಸ್ಟಂಗಳನ್ನು ಹೊಂದಿರುವ ಸಂಪೂರ್ಣ ವ್ಯವಸ್ಥೆಗೆ ಅಗತ್ಯವಿರುವ ಅಡ್ಮಿನಿಸ್ಟ್ರೇಶನ್ ಗೈಡ್‍ಯನ್ನು ಒದಗಿಸುತ್ತದೆ.
ಅಡ್ಮಿನಿಸ್ಟ್ರೇಶನ್ ಗೈಡ್ ಒಂದು ಸಂಪೂರ್ಣ ಅಕ್ಸೆಸ್ ಕಂಟ್ರೋಲ್ ಲಿಸ್ಟ್‍ (ACL) ಉಲ್ಲೇಖವನ್ನು ಹೊಂದಿದ್ದು, ಇದು ಪ್ರತಿಯೊಂದು ACL ಸಂಪನ್ಮೂಲಗಳನ್ನು ಎಲ್ಲಾ ಉಪ-ವ್ಯವಸ್ಥೆಗಳಿಗಾಗಿ ವ್ಯಾಖ್ಯಾನಿಸುವ ಹಾಗು ವಿವರಿಸುವ, ಪ್ರತಿ ಸಂಪನ್ಮೂಲಗಳು ಏನನ್ನು ನಿಯಂತ್ರಿಸುತ್ತವೆ ಹಾಗು ಸಾಧ್ಯವಿರುವ ಎಲ್ಲಾ ಕಾರ್ಯಗಳನ್ನು ಪಟ್ಟಿ ಮಾಡಿ ಈ ಕಾರ್ಯಗಳಿಂದ ಏನು ದೊರೆಯುತ್ತದೆ ಎನ್ನುವುದನ್ನು ಪಟ್ಟಿ ಮಾಡುವ ವ್ಯವಸ್ಥೆಯಾಗಿದೆ.
ರೆಡ್ ಹ್ಯಾಟ್ ಡೈರೆಕ್ಟರಿ ಸರ್ವರ್
ರೆಡ್ ಹ್ಯಾಟ್ ಡೈರೆಕ್ಟರಿ ಸರ್ವರ್ ಎನ್ನುವುದು ಒಂದು LDAP-ಆಧರಿತ ಪರಿಚಾರಕವಾಗಿದ್ದು, ಅದು ಅನ್ವಯ ಸಂಯೋಜನೆಗಳನ್ನು, ಬಳಕೆದಾರ ಪರಿಚಯಚಿತ್ರಣಗಳನ್ನು, ಸಮೂಹ ದತ್ತಾಂಶವನ್ನು, ಪಾಲಿಸಿಗಳನ್ನು, ಹಾಗು ನಿಲುಕಣಾ ನಿಯಂತ್ರಣ ಮಾಹಿತಿಯನ್ನು ಹೊಂದಿರುತ್ತದೆ. ಒಂದು ಐಡೆಂಟಿಟಿ ಮ್ಯಾನೇಜ್‍ಮೆಂಟ್ ಸವಲತ್ತಿಗಾಗಿನ ಕೇಂದ್ರವನ್ನು ನಿರ್ಮಿಸುವುದರ ಮೂಲಕ , ರೆಡ್ ಹ್ಯಾಟ್ ಡೈರೆಕ್ಟರಿ ಸರ್ವರ್ ಬಳಕೆದಾರ ನಿರ್ವಹಣೆಯನ್ನು ಸರಳಗೊಳಿಸಿ, ಅನಗತ್ಯ ದತ್ತಾಂಶವನ್ನು ಹಾಗು ಸ್ವಯಂಚಾಲಿತ ದತ್ತಾಂಶ ನಿರ್ವಹಣೆಯನ್ನು ತೊಡೆದುಹಾಕುತ್ತದೆ. ಪಾಲಿಸಿಗಳನ್ನು ಹಾಗು ನಿಲುಕಣಾ ನಿಯಂತ್ರಣ ಮಾಹಿತಿಯನ್ನು ಒಂದು ಕಾರ್ಯ ವ್ಯವಸ್ಥೆಗೆ ಅಧೀನವಾಗಿರದ, ಜಾಲಬಂಧ ಆಧರಿತವಾದ, ರಿಜಿಸ್ಟ್ರಿಯಲ್ಲಿ ಶೇಖರಿಸುವ ಮೂಲಕ ಸುರಕ್ಷತೆಯನ್ನು ಉನ್ನತಗೊಳಿಸುತ್ತಾ, ಇಂಟ್ರಾನೆಟ್ ಹಾಗು ಎಕ್ಸ್‍ಟ್ರಾನೆಟ್ ಅನ್ವಯಗಳಿಗಾಗಿ ಒಂದು ಏಕಮೇವ ದೃಢೀಕರಣ ಆಕರವನ್ನು ರೆಡ್ ಹ್ಯಾಟ್ ಡೈರೆಕ್ಟರಿ ಸರ್ವರ್ ನಿರ್ಮಿಸುತ್ತದೆ.
ರೆಡ್ ಹ್ಯಾಟ್ ದಸ್ತಾವೇಜುಗಳು ಸಂಪೂರ್ಣ ಆಜ್ಞೆ ಹಾಗು ಸ್ಕೀಮಾ ರೆಫರೆನ್ಸ್‍ನ ಜೊತೆಗೆ ಡೈರೆಕ್ಟರಿ ಸರ್ವರ್ ಅನ್ನು ಅನುಸ್ಥಾಪಿಸುವ, ನಿಯೋಜಿಸುವ, ನಿರ್ವಹಿಸುವ ಹಾಗು ಕಸ್ಟಮೈಸ್ ಮಾಡುವ ಬಗೆಗಿನ ಮಾರ್ಗದರ್ಶನವನ್ನು ನೀಡುತ್ತದೆ.
ರೆಡ್ ಹ್ಯಾಟ್ ಎಂಟರ್ಪ್ರೈಸ್ MRG
ರೆಡ್ ಹ್ಯಾಟ್ ಎಂಟರ್ಪ್ರೈಸ್ MRG ರಿಯಲ್‍ಟೈಮ್ ಎನ್ನುವುದು ಒಂದು ರೆಡ್ ಹ್ಯಾಟ್ ಎಂಟರ್ಪ್ರೈಸ್ ಲಿನಕ್ಸ್‍ನಲ್ಲಿನ (ರಿಯಲ್-ಟೈಮ್ ಕರ್ನಲ್ ಹಾಗು ರಿಯಲ್-ಟೈಮ್ ಕಾರ್ಯಕ್ಷಮತೆಯನ್ನು ಸಂರಚಿಸಲು ಹಾಗು ಸರಿಹೊಂದಿಸಲು ಬಳಸಬಹುದಾದ ಸೌಕರ್ಯಗಳ ಒಂದು ಸಂಗ್ರವನ್ನೂ ಒಳಗೊಂಡಿರುವ) ಸ್ಟಾಂಡರ್ಡ್ ಘಟಕಗಳಿಗೆ ಸೇರಿಸಬಹುದಾದ ಅಥವ ಬದಲಾಯಿಸಬಹುದಾದ ಪ್ಯಾಕೇಜುಗಳ ಸಂಗ್ರಹವಾಗಿದೆ. ರೆಡ್ ಹ್ಯಾಟ್ ಎಂಟರ್ಪ್ರೈಸ್ ಲಿನಕ್ಸ್‍ ಹಾಗು ರೆಡ್ ಹ್ಯಾಟ್ ಎಂಟರ್ಪ್ರೈಸ್ MRG ಇವರಡೂ ಒಟ್ಟುಗೂಡಿಕೆಯಿಂದಾಗಿ ನಂಬಿಕಾರ್ಹತೆಯನ್ನು, ಮಾನ್ಯವಾದ ಪರಿಹಾರಕ್ಕಿಂತ 100-ಪಟ್ಟು ವೇಗವಾಗಿ ಮಾಹಿತಿ ಬಳಕೆ ಹಾಗು ವರ್ಗಾವಣೆ ಮಾಡಬಹುದಾದ ಸಾಧ್ಯತೆಯನ್ನು ಒದಗಿಸುತ್ತದೆ. ಇದಲ್ಲದೆ, ವಿತರಿಸಲಾದ ಕಂಪ್ಯೂಟಿಂಗ್ ಗ್ರಿಡ್‍ನಾದ್ಯಂತ ದೊಡ್ಡ ಮೊತ್ತದ ಕಂಪ್ಯೂಟಿಂಗ್ ಕಾರ್ಯಗಳನ್ನು ವಿತರಿಸಲು MRG ಒಂದು ಶೆಡ್ಯೂಲರ್ ಅನ್ನು ಒದಗಿಸುತ್ತದೆ.
MRG ಯನ್ನು ಅನುಸ್ಥಾಪಿಸಲು ಹಾಗು ನಿಯೋಜಿಸಲು ಮಾರ್ಗದರ್ಶಿಯನ್ನು, ಒಂದು ಮೆಸೇಜಿಂಗ್ ಟ್ಯುಟೋರಿಯಲ್ ಅನ್ನು, MRG ಗ್ರಿಡ್ ಘಟಕವನ್ನು ನಿಯೋಜಿಸಲು ಒಂದು ಮಾರ್ಗದರ್ಶಿಯನ್ನು ಹಾಗು MRG ರಿಯಲ್-ಟೈಮ್ ಕರ್ನಲ್ ಅನ್ನು ಸರಿಹೊಂದಿಸಲು ರೆಡ್ ಹ್ಯಾಟ್ ದಸ್ತಾವೇಜು ಒಂದು ಮಾರ್ಗದರ್ಶಿಯನ್ನು ಒದಗಿಸುತ್ತದೆ.
ರೆಡ್ ಹ್ಯಾಟ್ ನೆಟ್‍ವರ್ಕ್ ಸ್ಯಾಟಲೈಟ್
ರೆಡ್ ಹ್ಯಾಟ್ ನೆಟ್‍ವರ್ಕ್ ಸ್ಯಾಟಲೈಟ್ ಎನ್ನುವುದು ಒಂದು ಲಿನಕ್ಸ್‍ ಗಣಕಗಳ ನಿರ್ವಹಣಾ ಪರಿಚಾರಕವಾಗಿದ್ದು ಅದರಿಂದ ನೀವು ನಿಮ್ಮದೇ ಆದ ಸವಲತ್ತುಗಳನ್ನು ಬಳಸಿಕೊಂಡು ಸಂಪೂರ್ಣ, ಸುರಕ್ಷಿತ ಲಿನಕ್ಸ್‍ ನಿಯೋಜನೆ ಹಾಗು ನಿರ್ವಹಣಾ ವ್ಯವಸ್ಥೆಯನ್ನು ಹೋಸ್ಟ್‍ ಮಾಡಲು ಅನುವು ಮಾಡಿಕೊಡುತ್ತದೆ. ಕೇವಲ ಸ್ಯಾಟಿಲೈಟ್ ಪರಿಚಾರಕವು ಎಲ್ಲಾ ಸಮಯದಲ್ಲೂ ರೆಡ್ ಹ್ಯಾಟ್ ನೆಟ್‍ವರ್ಕಿಗೆ ಸಂಪರ್ಕಹೊಂದಿರುವುದರಿಂದ, ನಿರ್ವಹಿಸಲ್ಪಡುವ ಗಣಕಕ್ಕಾಗಿನ (ವಾಸ್ತವೀಕರಣಗೊಂಡ ಗಣಕಗಳನೂ ಸೇರಿಸಿ) ಅಪ್‍ಡೇಟ್‍ಗಳನ್ನು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯ. ತಾತ್ಕಾಲಿಕವಾದ ಘಟಕಗಳನ್ನು ಸೇರಿಸುವುದರ ಮೂಲಕ ನಿಮ್ಮ ಜಾಲಬಂಧಕ್ಕೆ ಬೇರ್-ಮೆಟಲ್ ವ್ಯವಸ್ಥೆಗಳನ್ನು ಸೇರ್ಪಡಿಸಿ ಆ ಮೂಲಕ ನಿಮ್ಮ ಗಣಕವನ್ನು ಸಾರ್ವಜನಿಕ ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸದೆ ನಿಯೋಜನೆಗೆ ಸಿದ್ಧಗೊಳಿಸಬಹುದು.
ನೆಟ್‍ವರ್ಕ್ ಸ್ಯಾಟಲೈಟ್‍ಗಾಗಿನ ರೆಡ್ ಹ್ಯಾಟ್ ದಸ್ತಾವೇಜುಗಳು ಅನುಸ್ಥಾಪನೆ, ನಿಯೋಜನೆ, ಕ್ಲೈಂಟ್ ಸಂರಚನೆ ಹಾಗು ಚಾನೆಲ್ ನಿರ್ವಹಣೆಯ ಮಾರ್ಗದರ್ಶಿಗಳನ್ನು ಹೊಂದಿರುತ್ತದೆ. ಇದಲ್ಲದೆ, ನೆಟ್‍ವರ್ಕ್ ಸ್ಯಾಟಲೈಟ್ ಸರ್ವರಿಗಾಗಿನ ಒಂದು ಸಂಪೂರ್ಣ ರೆಫರೆನ್ಸ್‍ ಗೈಡನ್ನು ಹೊಂದಿದೆ.